Friday, April 17, 2020

Published April 17, 2020 by with 0 comment

Swami Vivekanand and Other Powerful Thoughts in Kannada


1. ನಂಬಿಕೆ
ಜಗತ್ತಿನ ಇತಿಹಾಸವು ತಮ್ಮಲ್ಲಿ ತಾವು ದೃಡ ನಂಬಿಕೆ ಹೊಂದಿದ  ಜನರ ಇತಿಹಾಸವಾಗಿದೆ. ನಾವು ಏನು ಬೇಕಾದರೂ ಮಾಡಬಲ್ಲೆವು ಮತ್ತು ಆ ಎಲ್ಲ ಶಕ್ತಿ ಸಾಮರ್ಥ್ಯ ನಮ್ಮಲ್ಲಿ ಇದೆ ಎಂದು ಬಲವಾದ ನಂಬಿಕೆ ಹೊಂದಿದರೆ ಮಾತ್ರ ನಾವು ಏನನ್ನಾದರೂ ಸಾಧಿಸಬಲ್ಲೆವು. ನಂಬಿಕೆಯಿಂದಲೇ ನಮ್ಮಲ್ಲಿ ದೈವತ್ವ ಜಾಗೃತವಾಗುತ್ತದೆ. ಯಾವಾಗ ಒಬ್ಬ ವ್ಯಕ್ತಿ ಅಥವಾ ಒಂದು ದೇಶ ನಂಬಿಕೆಯನ್ನು ಕಳೆದುಕೊಳ್ಳುತ್ತದೊ ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ.





















2.
ತಪ್ಪಿಯೂ ಕೂಡ ಇದು ನನ್ನಿಂದ ಅಸಾಧ್ಯ ಎಂದು ಹೇಳದಿರಿ. ನನ್ನಿಂದ ಆಗದು ಎಂದು ಹೇಳೋದು ಮಹಾಪಾಪ. ನಾವು ಅಮೃತ ಪುತ್ರರು. ಮಾಹಾ ವೀರ ಶೂರರ ಸಂತತಿ ನಮ್ಮದು. ಒಂದು ಕ್ಷಣ ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ನೆನಪಿಸಿಕೊಳ್ಳಿ. ಎಂತಹ ಪರಾಕ್ರಮಿ ಆತ ! ಆತನ ಪೀಳಿಗೆ ಅಲ್ಲವೇ ನಾವು. ಆತನದೇ ರಕ್ತ ನಮ್ಮಲ್ಲಿ ಹರಿಯುತ್ತಿಲ್ಲವೇ ??? ಅಂತಹ ಪವಿತ್ರ ರಕ್ತ ನಮ್ಮ ನರ ನಾಡಿಯಲ್ಲಿ ಹರಿಯುತ್ತಿರುವಾಗ ನಾವು ಪಾಪ ಕಾರ್ಯ ಮಾಡುವುದು ತರವೇ ? ಸಕಲ ಜಾಡ್ಯ, ಆಲಸ್ಯದಿಂದ ಹೊರಬಂದು ತಾಯಿ ಭಾರತೀಯನ್ನು ಈ ವಿಶ್ವದ ಸಿಂಹಾಸನದಲ್ಲಿ ಅಲಂಕರಿಸೋಣ.

3. ನಮ್ಮ ವ್ಯಕ್ತಿತ್ವ ನಮ್ಮ ಯೋಚನೆಗಳ ಫಲ. ನಾವು ಯೋಚಿಸಿದಂತೆ ನಮ್ಮ ಜೀವನ ನಿರ್ಮಾಣವಾಗುತ್ತದೆ. ನಾನು ದುರ್ಬಲ, ನನ್ನ ಕೈಲಿಂದ ಏನಾದೀತು ಎಂದು ಯೋಚಿಸುತ್ತಿದ್ದರೆ ನಾವು ಕೈಲಾಗದವರೇ ಆಗುತ್ತೇವೆ. ನಾನು ಶಕ್ತಿಶಾಲಿ ! ನಾನು ಏನು ಬೇಕಾದರೂ ಸಾಧಿಸಬಲ್ಲೆ ಎಂದು ಯೋಚಿಸಿದರೆ ನಾವು ಇತಿಹಾಸ ನಿರ್ಮಿಸಬಲ್ಲೆವು. ನಮ್ಮ ವೇದಗಳು, ನಮ್ಮ ಉಪನಿಷತ್ತುಗಳು, ನಮ್ಮ ಎಲ್ಲ ಹಿಂದೂ ಗ್ರಂಥಗಳು, ನಮ್ಮ ಭಗವತ್ಗೀತೆ ಹೇಳುವುದು ಇದನ್ನೇ !!! ಶಕ್ತಿಶಾಲಿಗಳಾಗಿ!!! ಸಂಜೀವಿನಿಗಾಗಿ ಇಡೀ ದ್ರೋಣಗಿರಿ ಪರ್ವತವನ್ನೇ ಎತ್ತಿ ತಂದ ವೀರ ಪರಾಕ್ರಮಿ ಶ್ರೀ ಆಂಜನೇಯ ನಮ್ಮ ದೇವರಲ್ಲವೇ ? ಅಂತಹ ವೀರ ಪರಾಕ್ರಮಿಯನ್ನು ಪೂಜಿಸುವ ನಾವು ದುರ್ಬಲರಾಗುವುದೇ ????

4. ನಾವು ಅಮೃತ ಪುತ್ರರು. ನಾವು ಆ ಭಗವಂತನ ಸಂತಾನ. ನಾವು ಪಾಪಿಗಳಲ್ಲ. ಓ ಸಿಂಹಗಳೇ ಜಾಗೃತರಾಗಿ. ನಾವು ಕುರಿಗಳೆಂಬ ಭ್ರಮೆಯನ್ನು ಬಿಟ್ಟು ಬಿಡಿ. ನಾವು ಮುಕ್ತ, ಪವಿತ್ರ ಆತ್ಮಗಳು. ನಮ್ಮಿಂದ ಹಿಂದೆ ಆದ ತಪ್ಪುಗಳಿಗೂ ಆ ದೇವರ ಕ್ಷಮೆ ಇದೆ. ಆದರೆ ಆ ತಪ್ಪು ಮರುಕಳಿಸುವುದು ಬೇಡ. ಪ್ರಾಣಿಗಳನ್ನು ಬೇಟೆ ಆಡಿ, ಹಿಂಸೆಯಲ್ಲಿ ತೊಡದ್ದ ವಾಲ್ಮೀಕಿಯು ನಂತರ ತನ್ನ ತಪ್ಪು ತಿದ್ದಿಕೊಂಡು ಮಹಾಕಾವ್ಯ ರಾಮಾಯಣ ರಚನೆ ಮಾಡಿ ಭ್ರಹ್ಮರಿಸಿ ಪದವಿಗೇರಿದ ಉದಾಹರಣೆ ನಮ್ಮ ಮುಂದಿದೆ. ಮುನ್ನಡೆಯಿರಿ ....ಹಿಂತಿರುಗಿ ನೋಡದಿರಿ .

5. ನಿಮ್ಮ ಜೀವನದ ಹೋರಾಟಗಳ ಬಗ್ಗೆ, ಕಷ್ಟಗಳ ಬಗ್ಗೆ, ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾವು ಈ ವರಗೆ ಆಕಳು ಸುಳ್ಳು ಹೇಳುವುದನ್ನು ನೋಡಿಲ್ಲ. ಅದು ಆಕಳು... ಮನುಷ್ಯನಲ್ಲ !!!  ಆದರಿಂದ ನೀವು ಕೆಲವೊಂದು ಸಲ ಸೋತಿರಬಹುದು, ಹಿನ್ನಡೆ ಅನುಭವಿಸಿರಬಹುದು. ಪರವಾಗಿಲ್ಲ !!! ಒಂದು ಆದರ್ಶವನ್ನು ಹಿಡಿದುಕೊಳ್ಳಿ. ಸಾವಿರ ಸಲ ಸೋತರೂ, ಮತ್ತೊಮ್ಮೆ ಮೈ ಕೊಡವಿ ಏಳಿ. ಆ  ಆದರ್ಶದೊಂದಿಗೆ ಮುನ್ನಡೆಯಿರಿ. ಒಂದೇ ದಿನದಲ್ಲಿ ರಾಮ ಸೇತುವೆ ನಿರ್ಮಾಣವಾಗಲಿಲ್ಲ. ಒಂದೊಂದು ಕಲ್ಲು, ಒಂದೊಂದು ಮರಳಿನ  ಕಣ , ಅಳಿಲಿನಂತಹ ಸಣ್ಣ ಜೀವಿಯ ಪರಿಶ್ರಮದ ಫಲವಾಗಿ ರಾಮ ಸೇತುವೆ ನಿರ್ಮಾಣವಾಗಿ ಪ್ರಭು ಶ್ರೀ ರಾಮನ ಪಾದ ದೂಳಿಯಿಂದ ಪವಿತ್ರವಾಯಿತು.


Swami Vivekanand in Kannada

Swami Vivekanand Quotes in Kannada


      edit

0 comments:

Post a Comment

For furture information comment here or contact : basavarajck@gmail.com